FREE EYE CHECK-UP CAMP HELD AT SNEHALAYA.

/

FREE EYE CHECK-UP CAMP HELD AT SNEHALAYA ON 16/11/2021

A free eye checkup camp was held on 16-11-2021 at the premises of Snehalaya.
The inspection camp was organized in collaboration of Snehalaya Charitable Trust, Mangalore Round Table 115, and Mangalore Ladies Circle 82.
 An inspection program was conducted by the doctors of Prasad Nethralaya, Mangalore.
More than 150 people from Bachalike, Pavoor, Manjeswara, Vorkady, Thoudugoli and Gerukatte made use of this camp .
 About 93 people with eye problems were found to be in need of spectacles and about 25 required eye surgery. They will be given spectacles and surgery for free at the earliest.
 Mr. Royster, Chairman of Mangalore Round Table, Mr. Fate Mohammad, Secretary Mr. Vinay Fernandes, Programme Coordinator, Mrs. Jennifer Fernandes, President of Mangalore Ladies Circle 82 and Mr. Joseph Crasta, Founder of Snehalaya were present for the event today. Staff and residents of Snehalaya also got benefited from this free eye checkup camp.
ಸ್ನೇಹಾಲಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ.
ದಿನಾಂಕ 16-11-2021 ರಂದು ಸ್ನೇಹಾಲಯ ಸಂಸ್ಥೆಯ ಆವರಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಈ ತಪಾಸಣಾ ಶಿಬಿರವನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್, ಮಂಗಳೂರು ರೌಂಡ್ ಟೇಬಲ್ 115, ಮಂಗಳೂರು ಲೇಡೀಸ್ ಸರ್ಕಲ್ 82 ಇವರ ಸಹಾಭಾಗಿತ್ವದಲ್ಲಿ ಆಯೋಜಿಸಲಾಗಿತ್ತು. ಮಂಗಳೂರಿನ ಪ್ರಸಿದ್ಧ ಪ್ರಸಾದ್ ನೇತ್ರಾಲಯದ ವೈದ್ಯರು ತಪಾಸಣಾ ಕಾರ್ಯಕ್ರಮವನ್ನು ನಡೆಸಿದರು. ಬಾಚಳಿಕೆ, ಪಾವೂರು, ಮಂಜೇಶ್ವರ, ವರ್ಕಾಡಿ, ತೌಡುಗೋಳಿ ಹಾಗೂ ಗೇರುಕಟ್ಟೆಯಿಂದ ಸುಮಾರು 150 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಊರ ನಾಗರಿಕರು ಈ ತಪಾಸಣಾ ಶಿಬಿರದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ಕಣ್ಣಿನ ದೃಷ್ಟಿಯ ಸಮಸ್ಯೆ ಇರುವ ಸುಮಾರು 93 ಮಂದಿಗೆ   ಕನ್ನಡಕದ ಅವಶ್ಯಕತೆ ಇರುವುದನ್ನು ಹಾಗೂ ಸುಮಾರು 25 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುವುದನ್ನು ಕಂಡುಕೊಳ್ಳಲಾಯಿತು. ಇವರಿಗೆ ಮುಂದಿನ ದಿನದಲ್ಲಿ ಉಚಿತ ವಾಗಿ ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು.
ಇಂದಿನ ಈ ಕಾರ್ಯಕ್ರಮದಲ್ಲಿ ಮಂಗಳೂರು ರೌಂಡ್ ಟೇಬಲ್ ನ ಅಧ್ಯಕ್ಷರಾದ ಶ್ರೀ ರೊಯ್ಸ್ಟರ್, ಕಾರ್ಯದರ್ಶಿಗಳಾದ ಶ್ರೀ ಫತೇ ಮಹಮ್ಮದ್ , ಕಾರ್ಯಕ್ರಮ ಸಂಯೋಜಕರಾದ ಶ್ರೀ ವಿನಯ್ ಫೆರ್ನಾಂಡಿಸ್, ಮಂಗಳೂರು ಲೇಡೀಸ್ ಸರ್ಕಲ್ 82 ರ ಅಧ್ಯಕ್ಷರಾದ ಶ್ರೀಮತಿ ಜೇನ್ನಿಫರ್ ಫೆರ್ನಾಂಡಿಸ್, ಸ್ನೇಹಾಲಯದ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ ಇವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ನೇಹಾಲಯದ  ನಿವಾಸಿಗಳು ಹಾಗೂ ಸಿಬ್ಬಂದಿಗಳೂ ಈ ಉಚಿತ ಕಣ್ಣಿನ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು.

Leave a Reply

Your email address will not be published. Required fields are marked *

Need Help?