Mr. Muniraju was found at Kedhumbhady, Manjeshwar in a mentally ill, depressed and un hygienic condition on 31st January 2020. The Snehalaya team picked him, treated him and provided basic comforts. He was a quick to respond to the medical treatment and shared details of his family. He hails from Hebbala, Bangalore, having 2 children. He recalled names of all the family members. Snehalaya team contacted Muniraju’s family through Hebbala Police authorities. Hebbala Police officials helped us to reach to Muniraju’s family.
Muniraju’s wife contacted us. And today, 16th July 2021, the family visited Snehalaya to take him home. Mr. Muniraju has been successfully re-united with his wife and 2 children after a span of 2 years. There were no bounds for their as they had lost hopes of getting him back. This reunion brought immense of joy amongst the family members.
ಸ್ನೇಹಾಲಯದಿಂದ ಮುನಿರಾಜುರವರ ಪುನರ್ವಸತಿ
ಜನವರಿ 31, 2020 ರಂದು ಶ್ರೀ ಮುನಿರಾಜುರವರು ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಮಂಜೇಶ್ವರದ ಕೆದುಂಬಾಡಿ ರಸ್ತೆಯಲ್ಲಿ ಕಂಡುಬಂದರು. ಸ್ನೇಹಾಲಯ ತಂಡವು, ಆತನನ್ನು ಸ್ನೇಹಾಲಯಕ್ಕೆ ಕರೆತಂದು ವೈದ್ಯಕೀಯ ಚಿಕಿತ್ಸೆ ನೀಡಿ, ಮೂಲ ಸೌಕರ್ಯಗಳನ್ನು ನೀಡಿದರು. ಶೀಘ್ರವಾಗಿ ಅವರು ಗುಣ ಮುಖರಾಗಿ ಅವರ ಕುಟುಂಬದ ವಿವರಗಳನ್ನು ಹಂಚಿಕೊಂಡರು. ಅವರು ಬೆಂಗಳೂರಿನ ಹೆಬ್ಬಾಳದವರು. 2 ಮಕ್ಕಳನ್ನು ಹೊಂದಿದ್ದಾರೆ. ಅವರು ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ನೆನಪಿಸಿಕೊಂಡರು. ಅವರ ಕುಟುಂಬವನ್ನು ಸಂಪರ್ಕಿಸಿಲು ಹೆಬ್ಬಾಳ ಪೊಲೀಸ್ ಅಧಿಕಾರಿಗಳು ಸ್ನೇಹಾಲಯ ತಂಡಕ್ಕೆ ಸಹಾಯ ಮಾಡಿದರು.
ಇಂದು 16.07.2021 ರಂದು ಮುನಿರಾಜು ಅವರ ಪತ್ನಿ ಸ್ನೇಹಾಲಯಕ್ಕೆ ಸಂಪರ್ಕಿಸಿ, ಅವರನ್ನು ಮತ್ತೆ ಮನೆಗೆ ಕರೆದೊಯ್ಯಲು ಸ್ನೇಹಾಲಯಕ್ಕೆ ಭೇಟಿ ನೀಡಿದರು. ಶ್ರೀ ಮುನಿರಾಜು ಅವರು, ಅವರ ಪತ್ನಿ ಮತ್ತು 2 ಮಕ್ಕಳೊಂದಿಗೆ 2 ವರ್ಷಗಳ ಅವಧಿಯ ನಂತರ ಮತ್ತೆ ಒಂದಾಗಿದ್ದಾರೆ. ಅವರನ್ನು ಮರಳಿ ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದ ಅವರ ಕುಟುಂಬಕ್ಕೆ ,ಈ ಪುನರ್ಮಿಲನವು ಕುಟುಂಬದ ಸದಸ್ಯರಲ್ಲಿ ಅಪಾರ ಸಂತೋಷವನ್ನು ತಂದಿದೆ.