A transformed new life to Someshwar

/

Someshwar aged 18 who was living a colorful life as a boy, a kind hearted,  jovial in his words and deeds, loved by everyone had a black cloud in his life. Gradually there was great change in his behavior and everyone felt sad about it. The family consulted doctors, necessary care was taken but he was not improving.  

One fine  day about 4 year back, he  disappeared from his house. His whereabouts where not known.  The family left no stones unturned to find him. A missing complaint wss lodged in the local  police station.
The family members lost all hopes as many times they were called to identify the dead bodies found in the locality assuming it was their missing boy.
On 7.12.2018 Snehalaya team found a boy roaming by roadside at Manjanady and was causing problems to the people around that area .
The Snehalaya team picked him, brought him to Snehalaya, provided all basic needs, care, love and shelter. He responded to medical treatment.  He started taking active part in all the activities. His entry to Snehalaya was the  turning point in his life. During counseling he revealed his address that he hails from Belagavi, Athani.
The Snehalaya team contacted his family on 22.06.2021 and the family was over joyed to hear the good news of someshwar’s existence. Someshwar’s family members visited Snehalaya and took him to back to their family and successfully reunited with his family after 4 years.
ಸ್ನೇಹದ ಆರೈಕೆಯಲ್ಲಿ ಸೋಮೇಶ್ವರನಿಗೆ ನವ ಬಾಳು
ಬಣ್ಣದ ಬದುಕು ಹೊತ್ತು ನಡೆಯುತ್ತಿದ್ದ ಆ ಯುವಕನಿಗೆ 18 ವಯಸ್ಸಿನಲ್ಲಿ ಧಿಡೀರ್ ಏನಾಯಿತೋ ಗೊತ್ತಿಲ್ಲ. ಎಲ್ಲರ ಜೊತೆ ಬೆರೆಯುತ್ತಿದ್ದ ಸರ್ವರಿಗೂ ಬೇಕಾಗಿದ್ದ ಯುವಕ ಧಿಡೀರ್ ಬದಲಾವಣೆಯು ಆತನ ಕುಟುಂಬ ಮಾತ್ರವಲ್ಲ, ನೆಂಟರಿಷ್ಟರನ್ನು ಕೂಡಾ ದುಖದಲ್ಲಿರುವಂತೆ  ಮಾಡಿತು. ಆದರೂ ಕುಟುಂಬದವರು ಧೃತಿಗೆಡದೆ 18 ನೇ ವಯಸ್ಸಿನಲ್ಲಿ ಆತನಿಗೆ ಚಿಕಿತ್ಸೆ ಪ್ರಾರಂಬಿಸಿದರು. ಆತನು ಚಿಕಿತ್ಸೆಯಲ್ಲಿ ಇದ್ದ.
ಹೀಗಿರಲೊಂದು ದಿನ, ನಾಲ್ಕು ವರ್ಷದ ಹಿಂದೆ ಕುಟುಂಬದವರ ಗಮನ ಅಲ್ಪ ತಪ್ಪಿದಾಗ ಮನೆಯಿಂದ ಆತ ಹೊರಗಿಳಿದ. ಕುಟುಂಬದ ಸದಸ್ಯರು ಹಲವಾರು ಕಡೆ ಹುಡುಕಿದರು. ಪೊಲೀಸ್ ಠಾಣೆ  ನಾಪತ್ತೆ ಪ್ರಕರಣ ದಾಖಲಾಯಿತು.
ತಿಂಗಳುಗಳು ಉರುಳಿದವು. ಅವನ ಬಗ್ಗೆ ಸುಳಿವು ಕೂಡಾ ದೊರೆಯಲಿಲ್ಲ. ಕುಟುಂಬದವರು ಸೋಮೇಶ್ವರನ ಆಸೆಯೇ ಬಿಟ್ಟುಬಿಟ್ಟರು. ಊರಲ್ಲಿ ಯಾವುದಾದರೂ ಶವ ಸಿಕ್ಕರೆ ಕುಟುಂಬದವರನ್ನು ಕರೆದು, ಸೋಮೇಶ್ವರನ ಮೃತ ದೇಹವೇ ಎಂದು ಖಚಿತ ಪಡಿಸಲು ಮನೆಯವರನ್ನು ಕರೆಯುತ್ತಿದ್ದರು.
ಇತ್ತ 07.12.2018 ರಲ್ಲಿ ಮಂಜನಾಡಿ ರಸ್ತೆ ಬದಿಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಕಂಟಕವಾಗಿ ಒಬ್ಬಾತ ಅಲೆದಾಡುತ್ತಿದ್ದ. ಆತನನ್ನು ಸ್ನೇಹಾಲಯ ತಂಡವು ಸ್ನೇಹಾಲಯದ ಮನೆಗೆ ಕರೆತಂದು ಆತನು ಸ್ನೇಹದ ಆರೈಕೆಯಲ್ಲಿದ್ದು, ದೈನಂದಿನ ಸ್ನೇಹಾಲಯದ ಚಟುವಟಿಕೆಯಲ್ಲಿ ಭಾಗವಹಿಸಿರುವುದು ಆತನ ಬದುಕಿಗೆ ಮತ್ತೊಂದು ರೀತಿಯಲ್ಲಿ ತಿರುವಿಗೆ ನಾಂದಿಯಾಯಿತು.
ಸ್ನೇಹಾಲಯದ ಮನೋವೈದ್ಯರ ಸಾಮಾಜಿಕ ಕಾರ್ಯಕರ್ತರ ಶ್ರಮದಿಂದ ಸೋಮೇಶ್ವರನ ವಿಳಾಸವು ಪತ್ತೆಯಾಯಿತು.ಅವರು ಬೆಳಗಾವಿಯ ಅಥಣಿಯವರೆಂದು ತಿಳಿದುಬಂತು ಸ್ನೇಹಾಲಯ ತಂಡವು ಅವರ ಮನೆಗೆ 22.06.2021 ರಂದು ಕರೆ ಮಾಡಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಸೊಮೇಶ್ವರನ ಅಣ್ಣನ ಮಕ್ಕಳು ಇಂದು ಸ್ನೇಹಾಲಯಕ್ಕೆ ಬಂದು ಸೋಮೆಶ್ವರನನ್ನು ಕರೆದುಕೊಂಡು ಹೋದರು.

 

Leave a Reply

Your email address will not be published. Required fields are marked *

Need Help?