ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ನೂತನವಾಗಿ ಆಯ್ಕೆಯಾದ ಶಾಸಕ ಎ.ಕೆ.ಎಂ ಅಶ್ರಫ್ ರವರು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಗೆ ತಮ್ಮ ಆಡಳೀತಾವಧಿಯ ಪ್ರಥಮ ಬೇಟಿಯನ್ನಿತ್ತರು. ಟ್ರಸ್ಟ್‌ನ ಸ್ಥಾಪಕರೂ, ಸಾರಥಿಯೂ ಆದ ಬ್ರ. ಜೋಸೆಫ್ ಕ್ರಾಸ್ತ ರವರು ಹೂಗುಚ್ಚ ಮತ್ತು ಶಾಲು ಹೊದಿಸಿ ಸ್ವಾಗತವನ್ನು ಕೋರಿದರು.
ಟ್ರಸ್ಟ್‌ನ ಬಗ್ಗೆ ವಿಚಾರ ವಿನಿಮಯ ನಡೆಸಿದ ಬಳಿಕ ಒಂದು ಗಿಡವನ್ನು ನೆಟ್ಟು ತಮ್ಮ ಸಂದೇಶವನ್ನು ನೀಡಿದರು. ಈ ಟ್ರಸ್ಟ್ ಸಮಾಜದಲ್ಲಿರುವ ಅನಾಥರಿಗೆ ಅಭಯ ನೀಡುವ ಒಂದು ಕೇಂದ್ರ ವಾಗಿದೆಯೆಂದೂ, ಮಂಜೇಶ್ವರ ಕ್ಷೇತ್ರವನ್ನು ದೇಶದಲ್ಲಿಯೇ ಒಂದು ಅತ್ಯುತ್ತಮ ಕ್ಷೇತ್ರವನ್ನಾಗಿ ಪರಿರ‍್ತಿಸಲು ತಮ್ಮೆಲ್ಲರ ಸಹಕಾರವನ್ನು ಆಶಿಸುತ್ತೇನೆಂದು ಅವರು ಕೇಳಿದರು. ಸ್ನೇಹಾಲಯವು ಈ ಕ್ಷೇತ್ರದ, ತಮ್ಮೆಲ್ಲರ ಮಾನವೀಯತೆಯ ಹಾಗೂ ಪ್ರೀತಿಯ ಒಂದು ಕೇಂದ್ರವಾಗಿದೆ, ಈ ಹಿಂದೆ ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿದ್ದಾಗಲೂ ಹಲವು ಬಾರಿ ನಾನು ಇಲ್ಲಿ ಬೇಟಿ ನೀಡಿದ್ದೇನೆಂದು ಸ್ನೇಹಾಲಯದೊಂದಿಗಿರುವ ತಮ್ಮ ಬಾಂಧವ್ಯದ ಬಗ್ಗೆ ವಿವರಿಸಿದರು.
ನಂತರ ಬ್ರ.ಜೋಸೆಫ್ ಅವರು ಮಾತನಾಡಿ, ಇದುವರಗೂ ಅವರು ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದವನ್ನು ಕೋರಿದರು, ಮುಂದಿನ ಅವರ ಎಲ್ಲಾ ಕೆಲಸ ಕರ‍್ಯಗಳಿಗೆ ಶುಭವನ್ನು ಹಾರೈಸಿದರು.
ಸ್ನೇಹಾಲಯ ಚಾಪೆಲ್ ನ ಫಾ.ಫೆಲಿಕ್ಸ್, ಶ್ರೀಮತಿ ಒಲೀವಿಯಾ, ಅಝೀಝ್ ಕಳತ್ತೂರು ಹಾಗೂ ಆರಿಫ್ ಜೊತೆಗಿದ್ದರು.