October 10, 2024
Manjeswar: Snehalaya, a leading social service organization, observed Mental Health Day on October 10 with a thought-provoking program at its auditorium.
The event was inaugurated by Br. Joseph Crasta, Executive Director, who lit the lamp and delivered an inspiring message emphasizing the significance of mental health.
Renowned psychiatrist Dr. Shashwath Satyanath was the keynote speaker, sharing valuable insights on the theme “From Stress to Success.” His interactive session equipped participants with practical strategies for managing stress and achieving success.
Ms. Sarita Crasta, Administrator, welcomed the gathering, while Mr. Clint Joseph, HOD Clinical Department, proposed the vote of thanks. Ms. Fareeda, MSW, expertly compered the program.
Staff, residents, and internship students from St. Aloysius and Government First Grade College actively participated in the program, engaging in meaningful discussions and gaining valuable insights.
Snehalaya remains committed to prioritizing mental well-being and fostering a supportive environment.

ದಿನಾಂಕ 10.10.2024 ರಂದು, ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ‘ಒತ್ತಡ ನಿರ್ವಹಣೆ’ ಎಂಬ ವಿಷಯದ ಕುರಿತು ಶಿಬಿರವನ್ನು ಆಯೋಜಿಸಲಾಗಿತ್ತು. ಇದರ ಸಂಪನ್ಮೂಲ ವ್ಯಕ್ತಿಯಾಗಿ, ಯೆನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯರಾದ ಡಾ. ಶಾಶ್ವತ್ ಸತ್ಯನಾಥ್ ಎಂ. ಇವರು ಉಪಸ್ಥಿತರಿದ್ದರು.
ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾ, ಸ್ನೇಹಾಲಯದ ಆಡಳಿತ ಅಧಿಕಾರಿ ಸರಿತಾ ಕ್ರಾಸ್ತಾ, ಮತ್ತು ಹಿರಿಯ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಶ್ರೀ ಕ್ಲಿಂಟ್ ಜೋಸೆಫ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರಿತಾ ಕ್ರಾಸ್ತಾರವರು ಸ್ವಾಗತದ ಹಿತನುಡಿಗಳನ್ನಾಡಿದರು, ಸಹೋದರ ಜೋಸೆಫ್ ಕ್ರಾಸ್ತಾರವರು ಮಾನಸಿಕ ಆರೋಗ್ಯ ದಿನದ ಮಹತ್ವವನ್ನು ವಿವರಿಸಿದರು. ಸ್ನೇಹಾಲಯದ ಸಿಬ್ಬಂದಿಗಳು ಶ್ರದ್ಧೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಧನ್ಯವಾದ ಸಮರ್ಪಣೆಯನ್ನು ಶ್ರೀ ಕ್ಲಿಂಟ್ ಜೋಸೆಫ್ ಇವರು ನೆರವೇರಿಸಿದರು, ಮತ್ತು ಸ್ನೇಹಾಲಯದ ಸಿಬ್ಬಂದಿಯಾದ ಕುಮಾರಿ ಫರಿದಾ ಇವರು ಕಾರ್ಯಕ್ರಮದ ನಿರೋಪಣೆಯನ್ನು ಮಾಡಿದರು.
