Snehalaya Admits Man Found Wandering in Valencia for Rehabilitation Care

ಅಲೆದಾಟದಿಂದ ಆಶಾಕಿರಣದತ್ತ, ಸೂರಜ್‌ಗೆ ಸ್ನೇಹಾಲಯದಲ್ಲಿ ಹೊಸ ಬದುಕಿನ ಆರಂಭ ಮಂಜೇಶ್ವರ, ಮಾರ್ಚ್ 04, 2026:ನಗರ ಜೀವನದ ಗದ್ದಲದ ಮಧ್ಯೆ, ಯಾರಿಗೂ ಗೋಚರಿಸದಂತೆ ಒಂದು ಜೀವ ಮೌನವಾಗಿ ಅಲೆದಾಡುತ್ತಿತ್ತು. ಬಿಹಾರ ಮೂಲದ ಸೂರಜ್, ಹೆಸರು ಸೂರ್ಯನಂತ ಪ್ರಕಾಶಮಾನವಾದರೂ, ಬದುಕಿನ ಹಾದಿ ಕತ್ತಲೆಯ ನೆರಳಿನಲ್ಲಿ ಕಳೆದುಹೋಗಿತ್ತು. ಮಂಗಳೂರು ನಗರದ ವಲೆನ್ಸಿಯಾದ ಬೀದಿಗಳಲ್ಲಿ ಅವರು ದಿಕ್ಕುತೋಚದೆ ನಡೆದುಹೋಗುತ್ತಿದ್ದರು. ಒಬ್ಬರೇ ತಮ್ಮೊಳಗೆ ನಗುತ್ತಾ, ಅಸ್ವಚ್ಛವಾದ ವಸ್ತ್ರಗಳು, ಸುತ್ತಮುತ್ತಲಿನ ಜಗತ್ತಿಗೆ ಸಂಬಂಧವಿಲ್ಲದಂತೆ ಕಾಣುವ ಕಣ್ಣುಗಳು ಇವೆಲ್ಲವೂ ಒಂದು ಮನಸ್ಸಿನ ಮೌನ ಕಿರುಚಾಟವಾಗಿತ್ತು. ಅವರ ಸ್ಥಿತಿಯನ್ನು […]
