New morning in Prabhat Das’ life as he reached home after 12 years

Prabhat Das aged 61 was brought to Snehalaya, Manjeshwar on 17/03/22 from Kripa Charitable Trust for reunion process under Pratyasha Project. After his admission at Snehalaya along with the medication he was encouraged to take part in different  therapeutic activities.

     As a part of this during the counselling session he shared a few information about his family and of his native. Our social workers came to know that he hails from Pura Medinipur of West Bengal. They tried to trace his family and contacted the local Panchayat, Police and could able to contact his son.
    The great day came in his life, Snehalaya team started their journey to his hometown on 13/04/22. He was joyfully received by his two sons at Howrah railway station.
     They shared that Prabhat Das had left his wife and family 12 years ago due to psychiatric illness. They were very happy to see him after so many years and promised to take good care of him . Family members were grateful towards Snehalaya and Kripa Charitable Trust for their kind and dedicated work.
12 ವರ್ಷಗಳ ನಂತರ ಮನೆ ತಲುಪಿದ ಪ್ರಭಾತ್ ದಾಸ್ ಜೀವನದಲ್ಲಿ ಹೊಸ ಸುಪ್ರಭಾತ ಮೂಡಿತು.
61 ವರ್ಷದ ಪ್ರಭಾತ್ ದಾಸ್ ಅವರನ್ನು ಪ್ರತ್ಯಶಾ ಯೋಜನೆಯಡಿ ಕುಟುಂಬದೊಡನೆ ಮರು ಸೇರ್ಪಡೆಯ ಪ್ರಕ್ರಿಯೆಗಾಗಿ ಕೃಪಾ ಚಾರಿಟಬಲ್ ಟ್ರಸ್ಟ್‌ನಿಂದ 17/03/22 ರಂದು ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತರಲಾಯಿತು. ಸ್ನೇಹಾಲಯದಲ್ಲಿ ಅವರು ದಾಖಲಾದ ನಂತರ ಔಷಧಿಗಳೊಂದಿಗೆ ವಿವಿಧ ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಲಾಯಿತು. ಇದರ ಭಾಗವಾಗಿ ಆಪ್ತ ಸಮಾಲೋಚನೆಯ ಸಮಯದಲ್ಲಿ ಅವರು ತಮ್ಮ ಕುಟುಂಬ ಮತ್ತು ಅವರ ಊರಿನ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡರು.  ಅವರು ಅವರ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸಿದರು ಮತ್ತು ಸ್ಥಳೀಯ ಪಂಚಾಯತ್, ಪೊಲೀಸರನ್ನು ಸಂಪರ್ಕಿಸಿದರು. ಅವರು ಪಶ್ಚಿಮ ಬಂಗಾಳದ ಮೇದಿನಿಪುರದವರು ಎಂದು ನಮ್ಮ ಸಾಮಾಜಿಕ ಕಾರ್ಯಕರ್ತರಿಗೆ ತಿಳಿದುಬಂತು.ಹಾಗೂ ಅವರ ಮಗನನ್ನು ಸಂಪರ್ಕಿಸಲು ಸಾಧ್ಯವಾಯಿತು.
    ಅವರ ಜೀವನದಲ್ಲಿ ಮಹತ್ತರವಾದ ದಿನ ಉದಯಿಸಿತು.ಸ್ನೇಹಾಲಯ ತಂಡ 13/04/22 ರಂದು ಅವರ ಊರಿಗೆ ಪ್ರಯಾಣ ಬೆಳೆಸಿತು. ಹೌರಾ ರೈಲ್ವೇ ನಿಲ್ದಾಣದಲ್ಲಿ ಅವರನ್ನು ಅವರ ಇಬ್ಬರು ಪುತ್ರರು ಸಂತೋಷದಿಂದ ಬರಮಾಡಿಕೊಂಡರು. ಪ್ರಭಾತ್ ದಾಸ್ ಅವರು 12 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥತೆಯಿಂದಾಗಿ ತಮ್ಮ ಪತ್ನಿ ಮತ್ತು ಕುಟುಂಬವನ್ನು ತೊರೆದಿದ್ದಾರೆ ಎಂದು ಅವರು ತಿಳಿಸಿದರು.ಅವರ ಮಕ್ಕಳು ಬಹಳ ವರ್ಷಗಳ ನಂತರ ತಮ್ಮ ತಂದೆಯನ್ನು ನೋಡಿ ತುಂಬಾ ಸಂತೋಷಪಟ್ಟರು ಮತ್ತು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಸ್ನೇಹಾಲಯ ಮತ್ತು ಕೃಪಾ ಚಾರಿಟಬಲ್ ಟ್ರಸ್ಟ್ ಅವರ  ಸಮರ್ಪಿತ ಸೇವಾ ಕಾರ್ಯಕ್ಕೆ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?